ಗಣಕೀಕರಣ

ಸಂಘದ ಪ್ರಸ್ತುತ ಆಡಳಿತ ಮಂಡಳಿಯು ಮಾನ್ಯ ಸದಸ್ಯರ ಆಶಯದಂತೆ ಸಂಘದ ಕಛೇರಿಯಲ್ಲಿ ಹೊಸ ಬ್ಯಾಂಕಿಂಗ್ ತತ್ರಾಂಶ (Software) ಅಳವಡಿಸಿಕೊಳ್ಳಲಾಗಿದ್ದು ಖಾತೆಗಳಿಗೆ ಸಂಬಂಧಪಟ್ಟ ವ್ಯವಹಾರಗಳ ಮಾಹಿತಿಯನ್ನು ಸದಸ್ಯರ ನೊಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಸಂದೇಶ(SMS) ಗಳ ಮೂಲಕ ಕಳುಹಿಸುವ ವ್ಯವಸ್ಥೆಯು ಈಗಾಗಲೇ ಜಾರಿಯಲ್ಲಿದೆ. ಹಾಗೆಯೇ ಸಂಘದ ಅಧಿಕೃತ ಜಾಲತಾಣ(Official Website)ಗೆ ಚಾಲನೆ ನೀಡಲಾಗಿದ್ದು http://www.jdmcs.in ಗೆ ಭೇಟಿ ನೀಡಿ ಸದಸ್ಯರು ತಮ್ಮ ಖಾತೆಗಳಿಗೆ ಸಂಬಂಧಪಟ್ಟ ವಿವರಗಳನ್ನು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಮಾನ್ಯ ಸದಸ್ಯರು ಈ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬುದು ಆಡಳಿತ ಮಂಡಳಿಯ ಮನವಿಯಾಗಿರುತ್ತದೆ.