ನ್ಯಾಯಾಂಗ ಇಲಾಖೆ ವಿವಿದೊಧೇಶ ಸಹಕಾರ ಸಂಘ ನಿಯಮಿತ

ಠೇವಣಿಗಳು

ಉಳಿತಾಯ ಠೇವಣಿ


ಸಂಘದ ಪ್ರತಿಯೊಬ್ಬ ಸದಸ್ಯರು ಮಾಸಿಕ ರೂ. 500-00 ಗಳನ್ನು ಉಳಿತಾಯ ಠೇವಣಿಯ ವಂತಿಗೆಯಾಗಿ ಪಾವತಿಸಬೇಕಾಗಿದೆ. ಈ ಸೌಲಭ್ಯವು ಸಂಘದ ಸದಸ್ಯರ ಹಿತದೃಷ್ಟಿಯಿಂದ ಕೂಡಿದ್ದು ಈ ಉಳಿತಾಯ ಠೇವಣಿಯ ಮೇಲಿನ ಬಡ್ಡಿಯನ್ನು ಪ್ರತಿ ಮೂರು (3) ವರ್ಷಗಳಿಗೊಮ್ಮೆ ವಿತರಿಸಲಾಗುವುದು


ಭವಿಷ್ಯನಿಧಿ


ಸಂಘದ ಪ್ರತಿ ಸದಸ್ಯರು ಭವಿಷ್ಯನಿಧಿಯ ವಂತಿಗೆಯಾಗಿ ಮಾಸಿಕ ಕನಿಷ್ಠ ರೂ. 100-00 ಗಳನ್ನು ಸಂಘಕ್ಕೆ ಪಾವತಿಸಬೇಕು. ಸದಸ್ಯರು ಇಚ್ಚಿಸಿದಲ್ಲಿ ಭವಿಷ್ಯನಿಧಿ ಮೊತ್ತವನ್ನು ಮಾಸಿಕ ರೂ. 20,000-00 ಗಳವರೆಗೆ ಹೆಚ್ಚಿಸಿಕೊಳ್ಳಲು ಅವಕಾಶವಿದ್ದು, ಪ್ರತಿ ಮೂರು (3) ವರ್ಷಗಳಿಗೊಮ್ಮೆ ಸದಸ್ಯರ ಭವಿಷ್ಯನಿಧಿ ಖಾತೆಯಲ್ಲಿ ಕ್ರೋಢೀಕೃತವಾಗುವ ಮೊತ್ತವನ್ನು ಬಡ್ಡಿ ಸಮೇತ ಮರುಪಾವತಿ ಮಾಡಲಾಗುವುದು.


ಮರಣ ಪರಿಹಾರ ನಿಧಿ


ಸಂಘದ ಯಾವುದೇ ಸದಸ್ಯರು ಮೃತಪಟ್ಟಲ್ಲಿ ಅವರ ನಾಮನಿರ್ದೇಶಿತರು ಸಂಘದ ಬಾಕಿ ಸಾಲದ ಬಾಬ್ತು ಮರುಪಾವತಿಸಿ ಮೃತರ ಮರಣ ಪ್ರಮಾಣ ಪತ್ರವನ್ನು ಸಲ್ಲಿಸಿದ ನಂತರ ರೂ.20,000-00 (ಇಪ್ಪತ್ತು ಸಾವಿರ ರೂಪಾಯಿ) ಗಳನ್ನು ಮರಣ ಪರಿಹಾರ ನಿಧಿಯಾಗಿ ಪಾವತಿಸಲಾಗುತ್ತದೆ.